ಮೆಕ್ಸಿಕೋದಲ್ಲಿ ನಡೆದ ತೈಲ ದುರಂತದ ಬಗ್ಗೆ ನೀವೆಲ್ಲಾ ತಿಳಿದೇ ಇದ್ದೀರಿ, ಆದರೆ ಅದು ನಿಜವಾಗಿಯೂ ಈ ದುರಂತ ಎಷ್ಟು ದೊಡ್ಡದು ಮತ್ತು ಅದರ ಪರಿಣಾಮ ಎಷ್ಟು ಭೀಕರ ಎನ್ನುವಕಲ್ಪನೆ ನಿಮಗ್ಯಾರಿಗೂ ಪ್ರಾಯಶಃ ಇರಲಾರದು. ಮೊದಲ ಸತ್ಯ, ಮೊದಲ ಅಂದಾಜು ಸುಮಾರು ದಿನಕ್ಕೆ ಐದು ಸಾವಿರ ಗ್ಯಾಲನ್ ಕಚ್ಚಾ ತೈಲ ಸಾಗರಕ್ಕೆ ಸೇರುತ್ತಿದೆ ಎಂದರು.
ಈಗ ಅವರೇ ,ಅಲ್ಲ ಎರಡು ಲಕ್ಷ ಗ್ಯಾಲನ್ ಗಳು ಅನ್ನುತ್ತಿದ್ದಾರೆ ಅಂದರೆ ಒಂದು ವಾರಕ್ಕೆ ಹದಿನಾಲ್ಕು ಲಕ್ಷ ಗ್ಯಾಲನ್ ಕಚ್ಚಾ ತೈಲ ಸಾಗರಕ್ಕೆ ಸೇರುತ್ತಿದೆ ಎಂದ ಹಾಗಾಯ್ತು.
ನಾನೊಬ್ಬ ೨೫ ವರ್ಷದ ಅನುಭವ ಹೊತ್ತ ಇಂಜಿನೀಯರ್, ನಾನು ತುಂಬಾ ದೊಡ್ಡದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಾಯಶಃ ಅದಕ್ಕೇ ನಾನು ಇದರ ಬ್ರಹತ್ತತೆಯನ್ನು ಊಹಿಸಿಕೊಳ್ಳಬಲ್ಲೆ.
ಮೊದಲಿನದಾಗಿ ಈ ಬಿ ಪಿ ಕಂಪೆನಿಯ "ಆಳ ಕೊರೆತ" ಎಂದರೆ ಸುಮಾರು ೫ ಸಾವಿರ ಅಡಿಗಳಷ್ಟು ಆಳದಲ್ಲಿ. ಮತ್ತು ಅಲ್ಲಿಂದ ಮತ್ತೆ ಸುಮಾರು ೩೦ ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆಯುವರು, ಅಂದರೆ ಭೂಮಿಯ ಹೊರ ಪದರದಿಂದಲೂ ಒಳಕ್ಕೆ,ನಮ್ಮಲ್ಲಿನ ಇಲ್ಲಿಯವರೆಗಿನ ಯಾಂತ್ರಿಕತೆಯು ತಲುಪಲಾಗುವಷ್ಟು. ಈ ಸಾರಿ ಅವರು ಕುಟುಕಿದ ಜಾಗದಲ್ಲಿನ ಕಚ್ಚಾ ತೈಲದ ಒತ್ತಡ ಎಷ್ಟಿತ್ತೆಂದರೆ ಅದು ಅವರ ಎಲ್ಲಾ ಸುರಕ್ಷಾ ಕವಾಟಗಳನ್ನೂ ಒಡೆದು
ಅವರ ಕೊರೆಯುವ ರಿಗ್ ಗಳನ್ನೂ ಧ್ವಂಸ ಮಾಡಿ ಮುಳುಗುವಂತೆ ಮಾಡಿತ್ತು. ಈ ಸ್ಥಿತಿಯನ್ನೊಮ್ಮೆ ಮನನ ಮಾಡಿಕೊಳ್ಳಿ, ಈ ತೈಲದ ಒತ್ತಡವೆಷ್ಟಿತ್ತೆಂದರೆ ನಮ್ಮ ಇಲ್ಲಿಯವರೆಗಿನ ಎಲ್ಲಾ ಸುರಕ್ಷಾ ಯಂತ್ರೋಪಕರಣಗಳೂ ಮತ್ತು ನಮ್ಮ ಇಲ್ಲಿಯವರೆಗಿನ ಈ ತೈಲದ ಚಿಮ್ಮುವಿಕೆ ( ಪ್ರಸರಣ)ಯನ್ನು ನಿಲ್ಲಿಸಲು ಮಾಡಿದ ಪ್ರಯತ್ನಗಳೆಲ್ಲವನ್ನೂ ಅದು ನಿಷ್ಕಿಯವನ್ನಾಗಿಸಿದೆ.
ಈ ರಂದ್ರ ೫ ಸಾವಿರ ಅಡಿ, ಸಾಗರದಾಳದಲ್ಲಿದ್ದು ದಿನಕ್ಕೆ ಎರಡು ಲಕ್ಷ ಲೀಟರ್ ಕಚ್ಚಾ ತೈಲವನ್ನು ಸಮುದ್ರಕ್ಕೆ ಸೇರಿಸುತ್ತಿದೆ.
ಈಗ ಅವರು ಸಮುದ್ರದಾಳದ ರಂದ್ರ ಮುಚ್ಚಲು ೫ ಸಾವಿರ ಅಡಿ ಯಲ್ಲಿದ್ದ ಭಗ್ನ ರಿಗ್ ನ್ನು ತೆಗೆಯಬೇಕು,
ಭಗ್ನ ರಿಗ್ ನ್ನು ತೆಗೆಯಲೇ ವರ್ಷಗಟ್ಟಲೆ ಸಮಯ ಹಾಗೂ ಕೋಟಿಗಟ್ಟಲೆ ಹಣ ಬೇಕಾದೀತು.
ಅದಲ್ಲ ವಿಷಯ ಸಮುದ್ರದಾಳದಲ್ಲಿನ ಆ ಕೆಸರುರಂದ್ರ ಮುಚ್ಚುವುದು ಹೇಗೆ? ಸಾಧ್ಯವೇ ಇಲ್ಲ!!!ಸಾಧ್ಯವೇ ಇಲ್ಲ!!!
ನಾನು ತಮಾಷೆ ಮಾಡುವುದಲ್ಲ, ಇದನ್ನು ಮುಚ್ಚಲು ಅಣು ಬಾಂಬೇ ಉಪಯೋಗಿಸ ಬೇಕಾದೀತು,ಆ ರಂದ್ರವನ್ನು ಮುಚ್ಚಲು, ಆದರೆ ಇದಾವುದೂ ಕಾರ್ಯ ಸಾಧು ಉಪಾಯವಲ್ಲ.
ಈ ರಂದ್ರವನ್ನು ಮುಚ್ಚಲು ಸಾಧ್ಯವಾಗದೇ ಹೋದಲ್ಲಿ ಈ ತೈಲ ಪ್ರಸರಣ ಇಡೀ ಸಾಗರ ಪ್ರಪಂಚವನ್ನೇ ನಾಶ ಮಾಡಬಲ್ಲಂತಹದು. ಒಮ್ಮೆ ಯೋಚಿಸಿ ಬರೇ ಒಂದು ಕ್ವಾರ್ಟ( ೦.೯೧೪ ಮಿ ಲೀ) ತೈಲ ಎರಡೂವರೆ ಲಕ್ಷ ಲೀಟರ್ ನೀರನ್ನು ವಿಷಮಯ ಮಾಡುತ್ತಾ ಸಾಗರದ ಜೀವಿಗಳನ್ನು ನಾಷ ಮಾಡುತ್ತದೆ, ಈಗ ನಿಮಗೆ ಇದರ ಬ್ರಹತ್ತತೆ ಅರ್ಥವಾಗುತ್ತಿದೆಯೇ?
ನಮ್ಮ ಕಲುಷಿತಮನದ ರಾಜಕೀಯ ಧುರೀಣರ ತಮ್ಮ ತಪ್ಪು ಮುಚ್ಚಲು ಹರಡಿಸುವಂತಹ ಕುಹಕ ಮಾತು ಮತ್ತು ಹಗರಣಗಳನ್ನೇ ನೋಡುತ್ತಾ ದಿನ ಕಳೆಯುವ ನಮಗೆ ಪ್ರಾಯಶ: ಇಲ್ಲಿಯವರೆಗಿನ ಮನುಕುಲದ ಬಹು ದೊಡ್ಡದುರಂತದತ್ತ ಸಾಗುತಿರುವೆಂಬ ಅರಿವಿದೆಯೇ?
ಈ ತೈಲ ದುರಂತ ಮತ್ತು ಹರಡುವಿಕೆ ಎಲ್ಲಿಯವರೆಗೆನಿಲ್ಲಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಇದು ಸಾಗರದ ಜೀವಿಗಳ ಸಂಪೂರ್ಣ ನಾಶದ ಹೊಣೆ ಹೊತ್ತುಕೊಂಡಿರುತ್ತದೆ, ಯಾರಿಗೆ ಗೊತ್ತು ಆ ರಂದ್ರದಡಿಯಲ್ಲಿನ ತೈಲ ಸರೋವರದ ಗಾತ್ರ?
ನಮ್ಮ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣವನ್ನು ಸರಿದೂಗಿಸಲು ಈ ಸಾಗರ ಎಷ್ಟು ಮಹತ್ವದ್ದೆಂಬುದು ನಿಮಗೆ ತಿಳಿದೇ ಇದೆ.
ಈ ವಿನಾಶ ತಪ್ಪಿಸಲು ದೇವರೇ ಬರಬೇಕೇನೋ, ಮನುಷ್ಯರಿಂದಲಂತೂ ಸಾಧ್ಯವೇ ಇಲ್ಲ ಇದು.
ಚಿತ್ರ ಕ್ರಪೆ :
(W: MOST SCARY EMAIL YOU HAVE READ......... pass it on (source not validated))
No comments:
Post a Comment