ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ.
ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕುಳಿತಿದ್ದ, ಸಹಾಯದ ಏನಾದರೂ ಹೊಸ ಕಿರಣ ಸಿಗಬಹುದೇ ಎಂದು ಯೋಚಿಸುತ್ತಾ....
ಅಕಾಸ್ಮಾತ್ತಾಗಿ ಒಬ್ಬ ವೃದ್ಧ ಆತನೆದುರಿಗೆ ಬಂದು ಕೇಳಿದ " ಏನು ... ತುಂಬಾ ಚಿಂತೆಯಲ್ಲಿರೋ ಹಾಗಿದೆ?"
ಈತ ತನ್ನ ಕಷ್ಟಗಳನ್ನೆಲ್ಲಾ ಅವನಿಗೆ ತಿಳಿಸಿದ.
ತುಂಬಾ ಸಮಾಧಾನದಿಂದ ಕೇಳಿದ ವೃದ್ಧ " ನಾನು ನಿನಗೆ ಸಹಾಯ ಮಾಡ ಬಲ್ಲೆ ಎನ್ನಿಸುತ್ತಿದೆ" ಎಂದ
ಈತನ ಹೆಸರು ಕೇಳಿದ ವೃದ್ಧ ಒಂದು ಚೆಕ್ ಬರೆದು ಆತನ ಕೈಗಿತ್ತು ಹೇಳಿದ " ಇಗೋ ಇದನ್ನು ತೆಗೆದುಕೋ, ಇವತ್ತಿಂದ ಸರಿಯಾಗಿ ಒಂದು ವರುಷದ ಬಳಿಕ ನಾವು ಇದೇ ಜಾಗದಲ್ಲಿ ಸಿಗೋಣ, ಆಗ ನೀನು ಈ ಹಣ ನನಗೆ ವಾಪಾಸ್ಸು ಕೊಟ್ಟರೆ ಸಾಕು" ಎಂದ.
ಆತ ಹೇಗೆ ಬಂದಿದ್ದನೋ ಹಾಗೇ ವಾಪಾಸ್ಸು ಹೋದ.
ಈತ ತನ್ನ ಕೈಯ್ಯಲ್ಲಿದ್ದ ಚೆಕ್ ನೋಡಿದ, ಅದು ೫,೦೦,೦೦ ಡಾಲರ್ ಚೆಕ್, ರುಜು ಹಾಕಿದಾತ ಆಗಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನ ಜೋನ್ ಡಿ ರಾಕ್ ಫೆಲ್ಲರ್.
"ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು ತೊಲಗಿದವು" ಈತನೆಂದುಕೊಂಡ,
ಆದರೆ ಆತನು ಆತ ಈ ಚೆಕ್ಕನ್ನು ತನ್ನ ತಿಜೋರಿಯಲ್ಲಿಯೇ ಇಟ್ಟುಕೊಂಡು, ಅದು ತನ್ನ ಬಳಿಯಿದೆ ಎನ್ನುವ ಯೋಚನೆಯೇ ತನಗೆ ತನ್ನ ಬುಸಿನೆಸ್ ನಲ್ಲಿ ಈ ದುರ್ವಿಧಿಯಿಂದ ಪಾರಾಗಲು ಏನಾದರೊಂದು ಹೊಸ ಯೋಚನೆ ಹೊಳೆಸೀತು ಎಂದುಕೊಂಡ.
ಅದು ಹಾಗೆಯೇ ಆಯ್ತು, ಆತನ ಈ ಹೊಸ ಆಲೋಚನೆಯೇ ಆತನ ವ್ಯಾಪಾರೀ ಮನೋಭಾವನೆಯನ್ನು ಎದ್ದೇಳಿಸಿ ಹೊಸ ಶಕ್ತಿ ತುಂಬಿತು ಮತ್ತು ಕೆಲವೇ ತಿಂಗಳಲ್ಲಿ ಆತ ತನ್ನ ಹಳೆಯ ಸಾಲದಿಂದ ಮುಕ್ತನಾಗಿದ್ದ, ಮತ್ತು ಆತನ ಲಾಭ ದ್ವಿಗುಣವಾಗತೊಡಗಿತು.
ಸರಿಯಾಗಿ ಒಂದು ವರುಷದ ಬಳಿಕ ಆತ ಅದೇ ಪಾರ್ಕನಲ್ಲಿ ಹಳೆಯ ಚೆಕ್ ಹಿಡಿದುಕೊಂದು ಆ ವೃದ್ಧನಿಗಾಗಿ ಕಾಯುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಆ ವೃದ್ಧ ಹಾಜರಾಗಿದ್ದ.
ಆದರೆ ಇನ್ನೇನು ವ್ಯಾಪಾರಿ ತನ್ನ ಏಳಿಗೆಯ ಕಥೆ ಅವನಿಗೆ ಹೇಳಿ ಧನ್ಯವಾಅದಾ ಸಮರ್ಪಿಸಿ ಅವನ ಚೆಕ್ ವಾಪಾಸು ಕೊಡಬೇಕೆಂದು ಕೊಂಡಿದ್ದ.
ಅಷ್ಟರಲ್ಲಿ ಒಬ್ಬ ದಾದಿ ಓಡುತ್ತ ಬಂದು ಆ ವೃದ್ಧನನ್ನು ಹಿಡಿದುಕೊಂಡಳು.
"ಅಂತೂ ನಾನು ಅವನನ್ನು ಹಿಡಿದು ಬಿಟ್ಟೆ, ಆತನು ನಿಮಗೇನೂತೊಂದರೆ ಕೊಡಲಿಲ್ಲ ತಾನೇ, ಆತ ವೃದ್ಧಾಶ್ರಮದಿಂದ ತಪ್ಪಿಸಿಕೊಂಡು ಬಂದು ತಾನು ಶ್ರೀಮಂತ ಜೋನ್ ಡಿ ರಾಕ್ ಫೆಲ್ಲರ್ ಎಂದೇ ಹೇಳುತ್ತಾನೆ" ಹೇಳಿ ಆಕೆ ಆತನನ್ನು ತನ್ನ ಜತೆ ಕರೆದೊಯ್ದಳು.
ವ್ಯಾಪಾರಿ ಸ್ಥಂಭೀಭೂತನಾದ.
ಹಾಗಾದರೆ ಇಡೀ ಒಂದು ವರ್ಷ ತನ್ನ ವ್ಯಾಪಾರವನ್ನು ಉತ್ತುಂಗಕ್ಕೇರಿಸಿದ್ದು ತನ್ನ ಹತ್ತಿರವಿದ್ದ ಈ ೫ ಲಕ್ಷದ ಚೆಕ್ಕೇ ಅಲ್ಲವೇ.
ಆಗಲೇ ಆತನಿಗೆ ಅರಿವಾದದ್ದು ತನ್ನ ವ್ಯಾಪಾರದ ಏಳಿಗೆಗೆ ಕಾರಣ ತನ್ನ ಹತ್ತಿರವಿದ್ದ ಹಣವಲ್ಲ,
ಬದಲು ಆತನನ್ನು ಹೊಸದಾಗಿ ಹೊಸ ರೀತಿ ಯೋಚಿಸಲು ಪ್ರೇರೇಪಿಸಿದ್ದ ಮಾನಸಿಕ ಶಕ್ತಿ ಆತನ ನಂಬುಗೆ.
(ನೆಟ್ ಕಥೆ ಆಧಾರಿತ)
No comments:
Post a Comment