Search This Blog

Wednesday, October 6, 2010


ಗ್ರೀಷ್ಮ ವಸಂತ

ಬಾಳ ಗ್ರೀಷ್ಮದ ಪಥದೆ,  ಪ್ರೀತಿ ಬದುಕಿನ ಮರವೇ
ನಲ್ಲೆಯೊಲವಿನ ಮತ್ತೇ ನೆರಳಿನಂತೆ

ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ
ಒಲವಿನುಯ್ಯಾಲೆಯನೇ ಜೀಕಿದಂತೆ

ಎದೆಯ ಭಾವನೆ ಬಸಿರು ರಾಗ ತಾನದ  ಉಸಿರು
ತನುವು ತನುವಲಿ ಬೆರೆತ  ನೆನಪೆ ಹಸಿರು

ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ
ಅವಳ ಚೆಲುವಿನ ಸಿರಿಯು  ಹರಿವ ತನುವ

ಕೋಗಿಲೆಯ ಪಂಚಮದ ಮಧುರ ಮಂಜುಳ ಗಾನ
ನಮ್ಮ  ಒಲವಿನ ಸವಿಯ ಕುರುಹು ತಾನ

ಹಳೆಯ ನೆನಪಿನ ಬುತ್ತಿ , ಬಿಚ್ಚಿ ತೆನ್ನನು ಮುತ್ತಿ
ಮನೆ ಮನದ ತುಂಬೆಲ್ಲಾ ನೆನಪು ಸುತ್ತಿ

ಪ್ರೀತಿ ನೆಮ್ಮದಿ ಭರಿತ ಬದುಕೇ ಸಾರ್ಥಕ ಪಥವು
ಸ್ನೇಹದೊಲವಿನ ನೆರಳಲಿನ್ನು  ಹರಿವು

ಉಕ್ಕಿ ಹರಿಯಲಿ ಒಲವು ವಿಶ್ವ ದೊಳಗೆಲ್ಲೆಲ್ಲೂ
ಪ್ರಕೃತಿ ಮನುಜನ ಸನಿಹ ಬಾಳ್ವೆಯಲ್ಲೂ

1 comment:

  1. ವಸಂತ್
    ನಿಮ್ಮ ಪ್ರೀತ್ಯಾದರಗಳಿಗೆ ಧನ್ಯ
    ನಿಮ್ಮ ಹಾಗೇ ನಾನೂ ತಡವಾಗಿಯೇ ನಿಮ್ಮ ಕಮೆಂಟ್ ನೋಡಿದೆ
    ನಿಮ್ಮ ಕವಿತೆಯನ್ನು ಈಗೀಗ ಮಂಗಳದಲ್ಲಿ ಓದುತ್ತಿದ್ದೇನೆ
    ನಿಮಗೆ ಒಳ್ಳೆಯ ಭವಿಷ್ಯವಿದೆ ಬರೆಯುತ್ತಿರಿ

    ReplyDelete