Search This Blog

Wednesday, October 6, 2010


ಗ್ರೀಷ್ಮ ವಸಂತ

ಬಾಳ ಗ್ರೀಷ್ಮದ ಪಥದೆ,  ಪ್ರೀತಿ ಬದುಕಿನ ಮರವೇ
ನಲ್ಲೆಯೊಲವಿನ ಮತ್ತೇ ನೆರಳಿನಂತೆ

ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ
ಒಲವಿನುಯ್ಯಾಲೆಯನೇ ಜೀಕಿದಂತೆ

ಎದೆಯ ಭಾವನೆ ಬಸಿರು ರಾಗ ತಾನದ  ಉಸಿರು
ತನುವು ತನುವಲಿ ಬೆರೆತ  ನೆನಪೆ ಹಸಿರು

ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ
ಅವಳ ಚೆಲುವಿನ ಸಿರಿಯು  ಹರಿವ ತನುವ

ಕೋಗಿಲೆಯ ಪಂಚಮದ ಮಧುರ ಮಂಜುಳ ಗಾನ
ನಮ್ಮ  ಒಲವಿನ ಸವಿಯ ಕುರುಹು ತಾನ

ಹಳೆಯ ನೆನಪಿನ ಬುತ್ತಿ , ಬಿಚ್ಚಿ ತೆನ್ನನು ಮುತ್ತಿ
ಮನೆ ಮನದ ತುಂಬೆಲ್ಲಾ ನೆನಪು ಸುತ್ತಿ

ಪ್ರೀತಿ ನೆಮ್ಮದಿ ಭರಿತ ಬದುಕೇ ಸಾರ್ಥಕ ಪಥವು
ಸ್ನೇಹದೊಲವಿನ ನೆರಳಲಿನ್ನು  ಹರಿವು

ಉಕ್ಕಿ ಹರಿಯಲಿ ಒಲವು ವಿಶ್ವ ದೊಳಗೆಲ್ಲೆಲ್ಲೂ
ಪ್ರಕೃತಿ ಮನುಜನ ಸನಿಹ ಬಾಳ್ವೆಯಲ್ಲೂ

2 comments:

  1. ನಮಸ್ತೆ ಗೋಪಿನಾಥ್ ಸರ್...
    ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ..
    ನಿಮ್ಮ ಕವನ ಮತ್ತು ಲೇಖನಗಳನ್ನು ಓದಿ ತುಂಬ ದಿನಗಳಾಗಿತ್ತು.
    ಈ ದಿನ ಇವುಗಳನ್ನು ಕಂಡು ಓದಿ ತುಂಬಾ ಕುಶಿಪಟ್ಟೆ..
    ಸರ್ ನಿಮ್ಮನ್ನು ಆರ್ಕುಟ್ಟಿನಲ್ಲಿ ಸಂದಿಸಲು ಹಲವು ಬಾರಿ ಪ್ರಯತ್ನ ಪಟ್ಟೆ..
    ಆದರೆ ನಿಮ್ಮನ್ನು ಚಾಟ್ ನಲ್ಲಿ ಸಂಪರ್ಕಿಸಲುಸಾಧ್ಯವಾಗಲಿಲ್ಲ ಈ ಮೊದಲು ಮಂಜು ಸರ್, ಆಸು ಹೆಗ್ಡೆ ಸರ್ ಎಲ್ಲರನ್ನು ಮಾತನಾಡಿಸಿದ್ದೇನೆ...
    ನಿಮ್ಮ ಕವನಗಳು ನನಗೆ ಮೊದಲಿನಿಂದಲೂ ತುಂಬಾ ಇಷ್ಟ.. ಆದರೆ ಸಂಪದದಲ್ಲಿ ಬರೆಯಲು ನನ್ನಿಂದ ಗೊತ್ತಾಗುತ್ತಿಲ್ಲ.. ಕಾರಣ ಸಂಪದ ಮೊದಲಿನಂತಿಲ್ಲದೆ ತುಂಬ ಬದಲಾಗಿದೆ..
    ಇರಿ ನಿಮ್ಮ ಬ್ಲಾಗ್ ಅಡ್ರೆಸ್ಸನ್ನು ನನ್ನ ಬ್ಲಾಗಿನಲ್ಲಿಟ್ಟು ಪ್ರೊಮೋಟ್ ಮಾಡುತ್ತೇನೆ. ಇದರಿಂದ ಎಲ್ಲರೂ ನಿಮ್ಮ ಕವನಗಳನ್ನು ಓದುತ್ತಾರೆ..
    ನಿಮ್ಮ ಕಾಮೆಂಟಿನಲ್ಲಿ ಈ ಮೊದಲಿನಂತೆ ತುಂಬಾ ಆತ್ಮೀಯತೆ ತುಂಬಿದೆ ನನ್ನನು ನೀವು ಮರೆತಿಲ್ಲ..
    ನಿಮ್ಮ ಕಾಮೆಂಟನ್ನು ಕಂಡಿದ್ದು ಸ್ವಲ್ಪ ತಡವಾಯಿತು..
    ಇದಕ್ಕೆ ಕ್ಷಮೆಯಿರಲಿ ಸರ್..
    ನಿಮ್ಮ ಪ್ರೋತ್ಸಾಹ ನಮ್ಮ ಮೇಲೆ ಹೀಗೆ ಇರಲೆಂದು ಹಾರೈಸುತ್ತ..

    ನಿಮ್ಮ ಪ್ರೀತಿಯ.. ವಸಂತ್.

    ReplyDelete
  2. ವಸಂತ್
    ನಿಮ್ಮ ಪ್ರೀತ್ಯಾದರಗಳಿಗೆ ಧನ್ಯ
    ನಿಮ್ಮ ಹಾಗೇ ನಾನೂ ತಡವಾಗಿಯೇ ನಿಮ್ಮ ಕಮೆಂಟ್ ನೋಡಿದೆ
    ನಿಮ್ಮ ಕವಿತೆಯನ್ನು ಈಗೀಗ ಮಂಗಳದಲ್ಲಿ ಓದುತ್ತಿದ್ದೇನೆ
    ನಿಮಗೆ ಒಳ್ಳೆಯ ಭವಿಷ್ಯವಿದೆ ಬರೆಯುತ್ತಿರಿ

    ReplyDelete