Search This Blog

Wednesday, April 8, 2015

ಕನಸ ಕದಿಯುವರಿಹರು ಹುಶಾರ್



ಹದಿ ಹರೆಯ ಮನದಲ್ಲಿ
ವಿಷ ಬೀಜ ವಿದಳನ ನಡೆಸಿ
ಕನಸ ಮಾರುವರಿಹರು
ಎಚ್ಚರಿಕೆಯಿರಲೀಗ ಮನ
ಮನೆಯ ಬಳಿಯಿಹರು
ಕನಸ ಕದಿಯುವರಿವರು ಹುಶಾರ್

ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು
ಉದ್ಭವಿಸೋ ಈ ಅಸುರರು
ಹದಿ ಮನಕೆ ಧಾಂಗುಡಿಯಿಟ್ಟು
ದ್ವೇಶ ದಳ್ಳುರಿ ಬಿತ್ತಿ ಬೆಳೆಸಿ
ಮಾರುವರು ದಳ್ಳಾಳಿಗಳಿಗೆ
ಮನುಕುಲ ಸಂಕುಲದ ವೈರಿಗಳಿಗೆ

ನೆಪಕೆ ಧರ್ಮದ ಹೆಸರ ಲೇಪಿಸಿ
ಹುಚ್ಚು ಆವೇಶದ ದಾಹಕ್ಕೆ ಬಲಿ
ಕೋಟಿ ಕೋಟಿ ಅಮಾಯಕ ಕನಸ ಲೂಟಿ
ಕೊಳ್ಳುಮಾರುವರಿರುವ ಈ ವಿಶ್ವ ಸಂತೆಯಲಿ
ಕನಸ ಕೊಳ್ಳುವವರಿಗೇನು ಬರ

ದೇಶ ಭಾಷೆ ಜಾತಿ ಭೇಧ,
ನ್ಯಾಯ ನೀತಿಗಳಿಲ್ಲದ ಇವರು
ಅದನೆ ಬಿತ್ತಿ ಬೆಳೆಸುವರು ನಮ್ಮ ನಮ್ಮಲ್ಲಿ
ಈ ಭಸ್ಮಾಸುರರು ಅವತರಿಸಿ
ಬೆಳೆಯೋ ಮುನ್ನ ಅವತರಿಸಬೇಕಿದೆ
ವಿಷ್ಣು- ಮೋಹಿನಿಯಾಗಿ

ವಿಶ್ವಕ್ಕೆ ಶಾಂತಿಯನು ಕಲಿಸಿಹೆವು ನಾವು
ಕಲಿಯಬೇಕಿದೆ ಸ್ವಾರ್ಥ ಅಳಿಸೊ ಪಾಠ
ಕೋಟಿ ಕಂಗಳ ಕನಸ ನೆನಸಾಗಿಸಲು
ಗೆಲ್ಲಬೇಕಿದೆ ಈ ಸಮರವನ್ನ
ನಮಗೆ ನಾವೇ ಎಚ್ಚರಿಸ ಬೇಕಿದೆ ಈಗ

ಕನಸು ಕದಿಯುವರಿಹರು ಹುಷಾರ್ 

No comments:

Post a Comment