ನನ್ನೆಲ್ಲಾ
ಆಸೆ ಆಕಾಂಕ್ಷೆಗಳ
ಹಸಿವು ತ್ರಷೆಗಳ
ಅದುಮಿಕ್ಕಿ ಸಾಕಿದ್ದೆ,
ನನ್ನ
ತುತ್ತನ್ನೂ ನಿನಗಿಕ್ಕಿ,
ಕನಸ ಕಂಗಳಲಿ
ನನ್ನದೂ ಬೆರೆಸಿ
ಬೆಳೆಸಿದ್ದೆ ನಿನ್ನ
ಸಮಯವೂ ಉಳಿದಿಲ್ಲ
ನಿನ್ನಲ್ಲಿ ನನಗಾಗಿ
ಇದೆಯಲ್ಲ ನಿನ್ನ ಚಿಣ್ಣ
ನಾಳೆಯ ನೀನಾಗಿ
ನಿನ್ನಾಸೆ ಕನಸಲ್ಲೂ
ಬೆರೆಯಲು
ನೀ ಮರೆತ ವಿಷಯವೊಂದಿದೆ
ನಾಳೆ ನೀನೇ ನನ್ನ
ಹಾಗಾದಾಗ
ನಿನ್ನ ಗತಿ
ನನಗೆ ಪರಿಚಿತ ಬಿಡು
ಏಕಾಕೀ ಜೀವನ
ಈ ಒಂಟಿತನ
ಇರಲಿ
ನಿನಗೂ
ಹಾಗಾಗದಿರಲಿ
No comments:
Post a Comment